ನಮಸ್ಕಾರ ಸ್ನೇಹಿತರೆ ಇನ್ನೂ ಕೆಲವೇ ದಿನಗಳು ಹೊಸ ವರ್ಷದ ಆರಂಭಕ್ಕೆ ಬಾಕಿ ಇದ್ದು ಹೊಸ ವರ್ಷದ ಆರಂಭವೆಂದರೆ ಎಲ್ಲರಿಗೂ ಮೋಜು-ಮಸ್ತಿ ಪಾರ್ಟಿ ಎಂದಿಲ್ಲ ಸಂಭ್ರಮದ ವಾತಾವರಣವೇ ಹೆಚ್ಚಾಗಿರುತ್ತದೆ. ಅದರಂತೆ ಪಾರ್ಟಿಯಲ್ಲಿ ಮಧ್ಯ ಸೇವನೆ ಇದ್ದೇ ಇರುತ್ತದೆ ಅಷ್ಟೇ ಅಲ್ಲದೆ ಹೊಸ ವರ್ಷದ ಸಂದರ್ಭಗಳಲ್ಲಿ ಹೆಚ್ಚಾಗಿಯೇ ಮಧ್ಯವನ್ನು ಸೇವನೆ ಮಾಡುತ್ತಾರೆ.
ಮದ್ಯಪ್ರಿಯರಿಗೆ ಬೇಸರದ ಸುದ್ದಿ :
ಆದರೆ ಇದೀಗ ಮದ್ಯ ಪ್ರಿಯರಿಗೆ ಸರ್ಕಾರವು ಮದ್ಯದ ದರವನ್ನು ಹೆಚ್ಚು ಮಾಡಿದ್ದು ಬೇಸರವನ್ನು ತಂದಿದೆ. ಮಧ್ಯದ ಬೆಲೆಯಲ್ಲಿ ಜನವರಿಯಿಂದ ಹೆಚ್ಚಳ ಆಗಲಿದ್ದು ಈಗಾಗಲೇ ಈ ಕುರಿತು ಕಂಪನಿಗಳು ಮಾಹಿತಿ ನೀಡಿದೆ ಎಂದು ಹೇಳಲಾಗುತ್ತದೆ ಹೌದು ಕೆಲವು ಮದ್ಯಗಳ ಬೆಲೆ ಏರಿಕೆಯೂ ಜನವರಿ ಮೊದಲ ದಿನದಿಂದ ಅಗಲಿದ್ದು ಇದೊಂದು ರೀತಿಯಲ್ಲಿ ಬೇಸರಕ್ಕೆ ಕಾರಣವಾಗಿದೆ.
ಇದನ್ನು ಓದಿ : ಗ್ರಾಮ ಪಂಚಾಯಿತಿಯಲ್ಲಿ ಏನೆಲ್ಲ ಸೇವೆಗಳು ಲಭ್ಯವಿದೆ ಎಲ್ಲ ಸಂಪೂರ್ಣ ಸೇವೆಗಳ ಪಟ್ಟಿ ಇಲ್ಲಿ ನೋಡಿ
ಈ ಮದ್ಯಗಳ ಬೆಲೆ ಏರಿಕೆ :
ಸರ್ಕಾರದ ಆರ್ಥಿಕ ಮೂಲವಾದ ಅಬಕಾರಿ ಸುಂಕದ ದರವನ್ನು ಸರ್ಕಾರ ವಿಧಿಗೆ ಹೆಚ್ಚಳ ಮಾಡಲಾಗಿದ್ದು ಅದರಂತೆ ಶೇಕಡ 20ರಷ್ಟು ಹೆಚ್ಚಳ ಮಾಡಿತು ಆದರೆ ಇದೀಗ ಮತ್ತೆ ಖಜನೆಯನ್ನು ಸರ್ಕಾರವು ತುಂಬಿಸಿಕೊಳ್ಳುವ ಉದ್ದೇಶದಿಂದ ಮಾದ್ಯ ತರದ ಏರಿಕೆಗೆ ಜನವರಿ ಒಂದರಿಂದ ಸೂಚನೆ ನೀಡಲಾಗಿದೆ. 180 ಎಂಎಲ್ ಗೆ ಓಟಿ ನೂರು ರೂಪಾಯಿ ಇರುತ್ತದೆ ಆದರೆ ಇದೀಗ 123 ರೂಪಾಯಿಗಳನ್ನು ಜನವರಿ ಒಂದರಿಂದ ಓಟಿ ಬೆಲೆ ಏರಿಕೆ ಮಾಡಲಾಗಿದೆ. ಶ್ರೀ ಲಕ್ಷ್ಮಿ ೧೨೩ ಬಿಪಿ ದರ ಇದ್ದು ಜನವರಿಯಿಂದ 159 ರೂಪಾಯಿಗಳಷ್ಟು ಆಗಲಿದೆ. ಅದರಂತೆ 8ಪಿಎಮ್ 100 ರೂಪಾಯಿ ಇದ್ದು ಹೊಸ ವರ್ಷದಲ್ಲಿ 123 ರೂಪಾಯಿಗಳಿಗೆ ಏರಿಕೆ ಮಾಡಲಾಗುತ್ತದೆ. ಹಾಗಾಗಿ ಮದ್ಯದ ಬೆಲೆ ಹೆಚ್ಚಳದ ಬಿಸಿಯು ಹೊಸ ವರ್ಷದ ಆಚರಣೆಗೆ ತಟ್ಟಲಿದೆ ಎಂದು ಹೇಳಬಹುದಾಗಿದೆ.
ಹೀಗೆ ಎಣ್ಣೆ ಪ್ರಿಯರಿಗೆ ಇದೊಂದು ರೀತಿಯಲ್ಲಿ ಹೊಸ ವರ್ಷಕ್ಕೆ ಆಘಾತದ ವಿಷಯ ಎಂದು ಹೇಳಿದರು ತಪ್ಪಾಗಲಾರದು ಸರ್ಕಾರವು ತನ್ನ ಖಜನೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮದ್ಯದ ದರವನ್ನು ಹೆಚ್ಚು ಮಾಡುತ್ತಿದ್ದು, ಜನವರಿಯಿಂದ ಮದ್ಯದದರ ಹೆಚ್ಚಾಗಿದೆ ಎಂಬುದರ ಈ ಮಾಹಿತಿಯನ್ನು ನಿಮ್ಮ ಎಣ್ಣೆಪ್ರಿಯರಿಗೆ ಶೇರ್ ಮಾಡಿ ಧನ್ಯವಾದಗಳು.