rtgh

ಗ್ರಾಮ ಪಂಚಾಯಿತಿಯಲ್ಲಿ ಏನೆಲ್ಲ ಸೇವೆಗಳು ಲಭ್ಯವಿದೆ ಎಲ್ಲ ಸಂಪೂರ್ಣ ಸೇವೆಗಳ ಪಟ್ಟಿ ಇಲ್ಲಿ ನೋಡಿ

ನಮಸ್ಕಾರ ಸ್ನೇಹಿತರೇ ವಿವಿಧ ಸೇವಾ ಸೌಲಭ್ಯಗಳನ್ನು ಸರ್ಕಾರವು ರಾಜ್ಯದ ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಜಾರಿಗೊಳಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ಸ್ಥಳೀಯರಿಗೆ ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ನಿರ್ಧಾರಗಳನ್ನು ಕೈಗೊಂಡಿದ್ದು ಗ್ರಾಮ ಪಂಚಾಯಿತಿಯಿಂದ ಯಾವೆಲ್ಲ ಸೇವೆಗಳು ಲಭ್ಯವಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

See here for a complete list of all the services available in the Gram Panchayat
See here for a complete list of all the services available in the Gram Panchayat

ಬಾಪೂಜಿ ಸೇವಾ ಕೇಂದ್ರ :

ಸ್ವಂತ ಉದ್ಯೋಗವನ್ನು ಗ್ರಾಮೀಣದ ಜನರು ಕೈಗೊಳ್ಳಬೇಕು ಹಾಗೂ ಅವರ ಸಾಮಾಜಿಕ ಶೈಕ್ಷಣಿಕ ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳಿಗಾಗಿ ಸರ್ಕಾರವು ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಲ್ಲಿ ಪಡೆದುಕೊಳ್ಳಲು ಗ್ರಾಮ ಪಂಚಾಯಿತಿಯಲ್ಲಿ ಸ್ಥಾಪನೆ ಮಾಡಿರುವ ಕೇಂದ್ರವೇ ಅದು ಬಾಪೂಜಿ ಸೇವ ಕೇಂದ್ರ. ಬಾಪೂಜಿ ಸೇವಾ ಕೇಂದ್ರದಲ್ಲಿ 19 ಸೇವೆಗಳ ಜೊತೆಗೆ 40 ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಒದಗಿಸಲಾಗುತ್ತಿದ್ದು ಆ ಸೇವೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೀವು ನೋಡಬಹುದು.

ಬಾಪೂಜಿ ಸೇವಾ ಕೇಂದ್ರದಲ್ಲಿ ದೊರೆಯುವ ಸೇವೆಗಳು :

ಬಾಪೂಜಿ ಸೇವಾ ಕೇಂದ್ರದಲ್ಲಿ 19 ಸೇವೆಗಳು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನೀಡಲಾಗುತ್ತಿದೆ ಅವುಗಳೆಂದರೆ, ಕಟ್ಟಡ ಪರವಾನಗಿ, ತೆರಿಗೆ ನಿರ್ಧಾರಣಾ ಪಟ್ಟ ವಿತರಣೆ, ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ, ಕಟ್ಟಡ ಸ್ವಾಧೀನ ಪತ್ರ, ಕಾರ್ಖಾನೆಗೆ ಅನುಮತಿ ಪತ್ರ, ವ್ಯಾಪಾರ ಪ್ರವಾನಗಿ ವಿತರಣೆ, ಜಾಹೀರಾತು ಪರವಾನಗಿ, ಕುಡಿಯುವ ನೀರಿನ ನಿರ್ವಹಣೆ, ನೀರಿನ ಸಂಪರ್ಕ ಕಡಿತ, ಬೀದಿ ದೀಪಗಳ ನಿರ್ವಹಣೆ, ಮನರಂಜನ ಪರವಾನಗಿ ನೀಡಿಕೆ, ಎಸ್ಕಾಮ್ಸ್ ನಿರಾಕ್ಷೇಪಣಿ ಪತ್ರ, ಗ್ರಾಮ ನೈರ್ಮಲ್ಯ ನಿರ್ವಹಣೆ, ದಾಖಲೆಗಳ ವಿತರಣೆ ಹೀಗೆ ಕೆಲವೊಂದು ಸೇವೆಗಳನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನೋಡಬಹುದಾಗಿದೆ.

ಕಂದಾಯ ಇಲಾಖೆಯಲ್ಲಿ 40 ಸೇವೆಗಳು :

ಬಾಪೂಜಿ ಸೇವಾ ಕೇಂದ್ರದಲ್ಲಿ ಸುಮಾರು 40 ಸೇವೆಗಳು ಕಂದಾಯ ಇಲಾಖೆಯ ವತಿಯಿಂದ ನೀಡಲಾಗುತ್ತಿದ್ದು ಅವುಗಳೆಂದರೆ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ,, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ, ಜನಸಂಖ್ಯೆ ಪ್ರಮಾಣ ಪತ್ರ, ಜಮೀನು ಇಲ್ಲದಿರುವ ದೃಡೀಕರಣ ಪತ್ರ ಹೀಗೆ ಸುಮಾರು 40 ಸೇವೆಗಳು ಕಂದಾಯ ಇಲಾಖೆಯ ವತಿಯಿಂದ ನೀಡಲಾಗುತ್ತಿದೆ.

ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈ ರೀತಿಯಾಗಿ ನಾವು ಗ್ರಾಮ ಪಂಚಾಯಿತಿಯ ವತಿಯಿಂದ ಏನೆಲ್ಲಾ ಸೇವೆಗಳನ್ನು ಪಡೆಯಬಹುದು ಎಂಬುದರ ಬಗ್ಗೆ ನೀವೇನಾದರೂ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://bsk.karnataka.gov.in ಈ ವೆಬ್ ಸೈಟಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯಲ್ಲಿ ಯಾವ ಸೇವೆಗಳು ಲಭ್ಯವಿವೆ ಎಂಬುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದು. ಅದರಂತೆ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಗ್ರಾಮೀಣ ಭಾಗದ ಜನರಿಗೆ ಶೇರ್ ಮಾಡಿ ಇದರಿಂದ ಅವರು ಸಹ ಗ್ರಾಮೀಣ ಭಾಗದಲ್ಲಿ ಯಾವೆಲ್ಲ ಸೇವೆಗಳು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿದೆ ಎಂಬುದನ್ನು ತೆಗೆದುಕೊಂಡು ಆ ಸೇವೆಗಳ ಪ್ರಯೋಜನವನ್ನು ಅವರು ಪಡೆದುಕೊಳ್ಳಲಿ ಧನ್ಯವಾದಗಳು.

Leave a Comment