ನಮಸ್ಕಾರ ಸ್ನೇಹಿತರೆ ಸರ್ಕಾರಿ ನೌಕರರ ಪಿಂಚಣಿ ಕುರಿತು ಕೇಂದ್ರ ಸರ್ಕಾರವು ಅಂತಿಮ ನಿರ್ಧಾರವನ್ನು ಘೋಷಣೆ ಮಾಡಿದ್ದು ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ ಬೇಸರ ಆಗುವುದಂತೂ ನಿಜ. ಈಗಾಗಲೇ ಹಲವಾರು ಚರ್ಚೆಗಳು ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿ ಕುರಿತಾಗಿ ನಡೆದಿದ್ದು ಒಂದು ನಿರ್ದಿಷ್ಟ ಕ್ರಮಕ್ಕೆ ಈ ಕುರಿತು ಕೇಂದ್ರ ಸರ್ಕಾರವು ಬಂದಿದೆ. ಹಣಕಾಸು ರಾಜ್ಯ ಸಚಿವರಾದ ಪಂಕಜ್ ಚೌದರಿಯವರು ಲೋಕಸಭೆಯಲ್ಲಿ ಮೊನ್ನೆ ಸರ್ಕಾರಿ ಉದ್ಯೋಗಿಗಳಿಗೆ ಲಿಖಿತ ಉತ್ತರದಲ್ಲಿ ಜಾರಿಯಲ್ಲಿದ್ದ ಪಿಂಚಣಿ ಯೋಜನೆಗೆ ಮರಳುವ ಯಾವುದೇ ಆಲೋಚನೆಯನ್ನು ಮಾಡಲಾಗಿಲ್ಲ ಎಂಬುದರ ಮಾಹಿತಿಯನ್ನು ತಿಳಿಸಿದ್ದಾರೆ.
ಹಳೆಯ ಪಿಂಚಣಿ ಯೋಜನೆ ಜಾರಿ ಸಾಧ್ಯವಿಲ್ಲ :
ಕೇಂದ್ರ ಸರ್ಕಾರ ನೌಕರರು 2004 ಜನವರಿ ಒಂದು ಮತ್ತು ಆ ಬಳಿಕ ನೇಮಕವಾಗಿದ್ದರೆ ಅಂತವರಿಗೆ ಯಾವ ರೀತಿಯ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಪ್ರಸ್ತಾಪವು ಸರ್ಕಾರದ ಮುಂದೆ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದು ಇದರೊಂದಿಗೆ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಪಿಂಚಣಿ ವ್ಯವಸ್ಥೆಯಾದ ನ್ಯಾಷನಲ್ ಪೆನ್ಷನ್ ಸಿಸ್ಟಮ್ ಅನ್ನೇ ಮುಂದುವರಿಸಲಾಗುತ್ತದೆ ಎಂದು ಹೇಳಿದರು.
ಹೊಸ ಮತ್ತು ಹಳೆಯ ಪೆನ್ಷನ್ ಸ್ಕೀಮ್ಗೆ ಇರುವ ವ್ಯತ್ಯಾಸ :
ಸರ್ಕಾರಿ ಉದ್ಯೋಗಿ ನಿವೃತ್ತರಾದಾಗ ಒಪಿಎಸ್ ನಲ್ಲಿ ಹಳೆಯ ಪೆನ್ಷನ್ ವ್ಯವಸ್ಥೆಯ ಅಡಿಯಲ್ಲಿ ಅವರಿಗೆ ಶೇಕಡ 50ರಷ್ಟು ಕೊನೆಯ ಸಂಬಳದಲ್ಲಿ ಮಾಸಿಕ ಪಿಂಚಣಿಯಾಗಿ ನೀಡಲಾಗುತ್ತಿತ್ತು. ಅದೇ ರೀತಿ ಸೇವೆಯಲ್ಲಿರುವ ಸಂದರ್ಭದಲ್ಲಿ ಪಿಂಚಣಿಗಾಗಿ ಉದ್ಯೋಗಿಯ ಸಂಬಳದಲ್ಲಿ ಹಣವನ್ನು ಕಡಿತ ಮಾಡಲಾಗುತ್ತಿರಲಿಲ್ಲ ಆದರೆ ಇದೀಗ ಹೊಸ ನ್ಯಾಷನಲ್ ಟೆನ್ಶನ್ನ ವ್ಯವಸ್ಥೆಯ ಅಡಿಯಲ್ಲಿ ಶೇಕಡ 10ರಷ್ಟು ಉದ್ಯೋಗಿಯ ಮೂಲವೇತನದಲ್ಲಿ ಕಡಿತ ಮಾಡಿ ಪೆನ್ಷನ್ ಫಂಡ್ ಗೆ ವರ್ಗಾಯಿಸಲಾಗುತ್ತದೆ. ಶೇಕಡಾ 14ರಷ್ಟು ಸರ್ಕಾರವು ಕೊಡುಗೆ ನೀಡುತ್ತದೆ.
ಇದನ್ನು ಓದಿ : ಗ್ರಾಮ ಪಂಚಾಯಿತಿಯಲ್ಲಿ ಏನೆಲ್ಲ ಸೇವೆಗಳು ಲಭ್ಯವಿದೆ ಎಲ್ಲ ಸಂಪೂರ್ಣ ಸೇವೆಗಳ ಪಟ್ಟಿ ಇಲ್ಲಿ ನೋಡಿ
ಅಟಲ್ ಪೆನ್ಷನ್ ಸ್ಕೀಂ :
ಇದುವರೆಗೂ ಆರು ಕೋಟಿಗೂ ಹೆಚ್ಚಿನ ಸರ್ಕಾರಿ ನೌಕರರು ಎಪಿ ವೈ ಅಟಲ್ ಪೆನ್ಷನ್ ಯೋಜನೆಯ ಅಡಿಯಲ್ಲಿ ಪಿಂಚಣಿಯನ್ನು ಪಡೆದಿದ್ದು ಾಕಷ್ಟು ಆಕ್ಷೇಪಣೆಗಳು ಎನ್‌ಪಿಎಸ್ ಬಗ್ಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ಏನೆಂದು ಗುರುತಿಸಿ ಪರಿಹಾರವನ್ನು ಹುಡುಕಲು ಇದೀಗ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಕಮಿಟಿಯು ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿಯಾದ ಟಿವಿ ಸೋಮನಾಥ್ ರವರ ನೇತೃತ್ವವನ್ನು ವಹಿಸಿದ್ದು ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಒಟ್ಟಾರೆಯಾಗಿ ಸರ್ಕಾರಿ ನೌಕರರು ಬೇಸರ ಹೊಂದಿದ್ದಾರೆ ಎಂದು ಹೇಳಬಹುದು.
ಹೀಗೇಕೆ ಕೇಂದ್ರ ಸರ್ಕಾರ ನೌಕರರಿಗೆ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಬೇಸರ ಉಂಟಾಗಿದೆ. ಹಾಗಾಗಿ ನಿಮಗೆ ತಿಳಿದಿರುವ ಸರ್ಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ಮಾಡಲಾಗುತ್ತಿಲ್ಲ ಹೊಸ ಪಿಂಚಣಿ ವ್ಯವಸ್ಥೆಯೇ ಮುಂದುವರೆಯುತ್ತದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.