ನಮಸ್ಕಾರ ಸ್ನೇಹಿತರೇ, ಸಾಕಷ್ಟು ಕಂಪನಿಗಳು ಅದರಲ್ಲಿಯೂ ದೊಡ್ಡ ದೊಡ್ಡ ಕಂಪನಿಗಳು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವ ಉದ್ದೇಶದಿಂದ ನೀಡುತ್ತಿದೆ ಅದೇ ರೀತಿ ಇದೀಗ ಸುಮಾರು 75,000ಗಳ ಸಹಾಯ ಧನವನ್ನು ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿದಂತಹ ಕೋಲ್ಗೇಟ್ ಕಂಪನಿಯು ನೀಡಲು ನಿರ್ಧರಿಸಿದೆ. ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ colgate ಕಂಪನಿಯು ಈ ಆಫರನ್ನು ನೀಡುತ್ತಿದೆ.
ಕೋಲ್ಗೇಟ್ ಪಾಮೋಲಿವ್ ಲಿಮಿಟೆಡ್ :
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲು ಇದೀಗ colgate ಪಾಮೂಲಿವ್ ಲಿಮಿಟೆಡ್ ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಕೊಡುಗೆಯನ್ನು ಪ್ರಾರಂಭಿಸಿದೆ. ವಿದ್ಯಾರ್ಥಿ ವೇತನವನ್ನು ದೇಶದ ಯಾವುದೇ ಪ್ರಖ್ಯಾತ ವಿಶ್ವವಿದ್ಯಾನಿಲಯ ಅಥವಾ ವಿದ್ಯಾಸಂಸ್ಥೆಯಿಂದ ಡೆಂಟಲ್ ಸರ್ಜರಿ ಕೋರ್ಸ್ ಅನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದಾಗಿದೆ.
ಈ ವಿದ್ಯಾರ್ಥಿ ವೇತನಕ್ಕೆ ಇರುವ ಅರ್ಹತೆಗಳು :
Colate ಕಂಪನಿಯು ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ದೇಶದಲ್ಲಿರುವ ಯಾವುದೇ ರಾಜ್ಯದ ವಿದ್ಯಾರ್ಥಿಯು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಯಾವುದೇ ವರ್ಷದ ಕೋರ್ಸ್ ನಲ್ಲಿ ಸೆಕೆಂಡರಿ ಪಿಯುಸಿ ಲೋ ೈನ್ಸ್ ಸ್ಟ್ರೀಮ್‌ನಲ್ಲಿ ಶೇಕಡ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ಇದನ್ನು ಓದಿ : ನವೆಂಬರ್ ಅನ್ನಭಾಗ್ಯ ಹಣ ಬಂದಿದೆಯಾ? ಈ ಕೂಡಲೇ ಚೆಕ್ ಮಾಡಿಕೊಳ್ಳಿ
ಈ ವಿದ್ಯಾರ್ಥಿ ವೇತನಕ್ಕೆ ಬೇಕಾಗಿರುವ ದಾಖಲೆಗಳು :
ಕೊಲ್ಗೆಟ್ ಕಂಪನಿ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಬೇಕಾಗಿರುವ ದಾಖಲೆಗಳೆಂದರೆ ಆಧಾರ್ ಕಾರ್ಡ್ ಪಾಸ್ಪೋರ್ಟ್ ಸೈಜ್ ಫೋಟೋ ಸೆಕೆಂಡ್ ಪಿಯುಸಿ ಮಾರ್ಕ್ಸ್ ಕಾರ್ಡ್ ಬಿಡಿಎಸ್ ಕೋರ್ಸ್ ನಲ್ಲಿ ಪ್ರವೇಶಪದೆದಿರುವುದರ ರಶೀದಿ ಬ್ಯಾಂಕ್ ಪಾಸ್ ಬುಕ್ ಆದಾಯ ಪ್ರಮಾಣ ಪತ್ರ ಮೊಬೈಲ್ ನಂಬರ್ ಹೀಗೆ ಕೆಲವೊಂದು ಆಗುತ್ತೆ ದಾಖಲೆಗಳು ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ :
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ https://www.buddy4study.com/page/colgate-keep-india-smiling-scholarship-program ಜನವರಿ 31 2024ರ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಮುಖ್ಯವಾಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ ಸುಮಾರು 75,000ಗಳವರೆಗೆ ಸಹಾಯಧನವನ್ನು ಅರ್ಜಿ ಸಲ್ಲಿಸಿದವರಿಗೆ ನೀಡಲಾಗುತ್ತದೆ.
ಹೀಗೆ ಸಾಕಷ್ಟು ಕಂಪನಿಗಳು ವಿದ್ಯಾರ್ಥಿಗಳಿಗಾಗಿಯೇ ಹಲವಾರು ವಿದ್ಯಾರ್ಥಿ ವೇತನಗಳನ್ನು ಜಾರಿಗೆ ಮಾಡುತ್ತಿದ್ದು ಇದೀಗ ಕೋಲ್ಗೇಟ್ ಕಂಪನಿಯು ತನ್ನ ಸ್ಮೈಲ್ ಅನ್ನು ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವಂತಹ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಧನ್ಯವಾದಗಳು.