rtgh

ಗ್ರಾಮಒನ್ ತೆರೆಯಲು ರಾಜ್ಯದ 15 ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ : ಸ್ಥಳೀಯರಿಗೆ ಮೊದಲ ಆದ್ಯತೆ

ನಮಸ್ಕಾರ ಸ್ನೇಹಿತರೆ, ದೇಶದ ನಾಗರಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ವಿಶೇಷ ಯೋಜನೆಗಳ ಪ್ರಯೋಜನಗಳನ್ನು ಹಾಗೂ ಸೇವೆಗಳನ್ನು ಸರ್ಕಾರವು ಗ್ರಾಮೀಣ ಭಾಗದಲ್ಲಿರುವ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಇದ್ದು ಪಡೆದುಕೊಳ್ಳುವುದಕ್ಕಾಗಿ ಇರುವ ಒಂದು ಮಾರ್ಗವೆಂದರೆ ಅದು ಗ್ರಾಮವನ್ ಕೇಂದ್ರಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಲ್ಲದೆ ಪ್ರತಿಭಾವಂತ ನಿರುದ್ಯೋಗಿ ಯುವಜನತೆಯು ಗ್ರಾಮೀಣ ಭಾಗದಲ್ಲಿ ಇದ್ದು ಅವರು ಸ್ವಯಂ ಉದ್ಯೋಗವನ್ನು ಸ್ಥಾಪಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವು ಸಹ ಆಗಿದೆ. ಪ್ರಸ್ತುತ ಸೇವಾ ಸಿಂಧು ಫೋಟೋನಲ್ಲಿರುವ 80 ಇಲಾಖೆಗಳ 798 ಸೇವೆಗಳನ್ನು ಗ್ರಾಮೀಣ ಜನರಿಗೆ ಗ್ರಾಮವನ್ ಕೇಂದ್ರಗಳ ಮೂಲಕ ಒದಗಿಸಲಾಗುತ್ತಿದೆ.

ಗ್ರಾಮ ಒನ್ ಕೇಂದ್ರ ತೆರೆಯಲು ಅವಕಾಶ :

ಒಂದು ವೇಳೆ ನೀವೇನಾದರೂ ಗ್ರಾಮವನ್ನು ಕೇಂದ್ರಗಳನ್ನು ತೆರೆಯಬೇಕೆನ್ನುವ ಆಸಕ್ತಿಯನ್ನು ಹೊಂದಿದ್ದರೆ ಸರ್ಕಾರದಿಂದ ಇದೆ ಈಗ ಅವಕಾಶ ಕಲ್ಪಿಸಲಾಗುತ್ತಿದೆ. ಏಕೆಂದರೆ ಮೈಸೂರು ಮತ್ತು ಕಲಬುರ್ಗಿ ವಿಭಾಗದ 15 ಜಿಲ್ಲೆಗಳನ್ನು ನೂರಾರು ಗ್ರಾಮಗಳ ಆಸಕ್ತ ಯುವಜನತೆಯಿಂದ ಗ್ರಾಮವನ್ ಪ್ರಾಂತೈಸಿ ತೆರೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗುತ್ತಿದೆ. ಸ್ವಂತ ಊರಿನಲ್ಲಿ ಉದ್ಯೋಗ ಮಾಡುವ ಅವಕಾಶವು ಗ್ರಾಮ ಕೇಂದ್ರಗಳನ್ನು ತೆರೆಯುವುದರಿಂದ ಗೌರವಯುತವಾದ ಹಾಗೂ ಅದಕ್ಕೆ ಸಂಬಂಧಿಸಿದಂತೆ ತಕ್ಕನಾದ ಸಂಪಾದನೆ ಗ್ರಾಮೀಣ ಭಾಗದ ಜನತೆಗೆ ಸೇವೆ ಸಲ್ಲಿಸಿದಂತಹ ಸಮಾಧಾನವು ಸಹ ಸಿಗುತ್ತದೆ.

Applications are invited in 15 districts of the state to open GramOne
Applications are invited in 15 districts of the state to open GramOne

ಜಿಲ್ಲೆಗಳಲ್ಲಿ ಗ್ರಾಮಒನ್ ಕೇಂದ್ರಗಳನ್ನು ತೆರೆಯಲು ಅವಕಾಶ :

ಕರ್ನಾಟಕ ಸರ್ಕಾರವು ಈ ಜಿಲ್ಲೆಗಳಲ್ಲಿ ಗ್ರಾಮವನ್ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆ ಜಿಲ್ಲೆಗಳೇಂದರೆ

ಮೈಸೂರು ವಿಭಾಗದ ಜಿಲ್ಲೆಗಳು :

ಮೈಸೂರು ವಿಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು ಚಾಮರಾಜನಗರ ಕೊಡಗು ಹಾಸನ ದಕ್ಷಿಣ ಕನ್ನಡ ಮಂಡ್ಯ ಉಡುಪಿ ಮೈಸೂರು ಈ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಬಹುದು.

ಕಲ್ಬುರ್ಗಿ ವಿಭಾಗದ ಜಿಲ್ಲೆಗಳು :

ಕಲ್ಬುರ್ಗಿ ವಿಭಾಗದ ಜಿಲ್ಲೆಗಳಾದ ಬೀದರ್ ಗುಲ್ಬರ್ಗ ಬಳ್ಳಾರಿ ಕೊಪ್ಪಳ ಯಾದಗಿರಿ ರಾಯಚೂರು ವಿಜಯನಗರಗಳಲ್ಲಿ ಗ್ರಾಮವನ್ ಕೇಂದ್ರಗಳನ್ನು ತೆರೆಯಬಹುದು.

ಗ್ರಾಮವನ್ ಕೇಂದ್ರಗಳನ್ನು ತೆರೆ ಬೇಕಾದರೆ ಇರುವ ಅರ್ಹತೆಗಳು :

ಗ್ರಾಮವನ್ ಕೇಂದ್ರಗಳನ್ನು ತೆರೆಯಬೇಕಾದರೆ ಕೆಲವೊಂದು ಮಾನದಂಡಗಳನ್ನು ಅನುಸರಿಸಬೇಕು ಅವುಗಳೆಂದರೆ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು. ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು. 10ನೇ ತರಗತಿ ವಿದ್ಯಾಭ್ಯಾಸ ಹಾಗೂ ಹೆಚ್ಚಿನ ವಿದ್ಯಾಭ್ಯಾಸವನ್ನು ಹೊಂದಿರುವವರಿಗೆ ಮೊದಲ ಆದ್ಯತೆ. ಕಂಪ್ಯೂಟರ್ ಜ್ಞಾನವನ್ನು ಪಡೆದಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ಗ್ರಾಮವನ್ನು ಕೇಂದ್ರಗಳನ್ನು ತೆರೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ, ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ನಿವಾಸ ದೃಢೀಕರಣ ಪತ್ರ ಮೊಬೈಲ್ ನಂಬರ್ ಇಮೇಲ್ ಐಡಿ ಬ್ಯಾಂಕ್ ಪಾಸ್ ಬುಕ್ ಶೈಕ್ಷಣಿಕ ವಿದ್ಯಾರ್ಥಿಗೆ ಸಂಬಂಧಿಸಿದ ದಾಖಲೆಗಳು ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಕರ್ನಾಟಕದಲ್ಲಿ ಗ್ರಾಮವನ್ ಕೇಂದ್ರಗಳನ್ನು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಾದರೆ ಕರ್ನಾಟಕ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://kal-mys.gramaone.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಇದಕ್ಕೆ ಅರ್ಜಿ ಶುಲ್ಕ ನೂರು ರೂಪಾಯಿ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಡಿಸೆಂಬರ್ 2023 ಆಗಿರುತ್ತದೆ.

ಹೀಗೆ ಗ್ರಾಮ ಒನ್ ಕೇಂದ್ರಗಳನ್ನು ತೆಗೆಯಲು ಆಸಕ್ತಿ ಹೊಂದಿರುವ ಯುವಕ ಯುವತಿಯರು ಇದೀಗ ಅವರಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವುದರ ಮೂಲಕ ನಾವು ಸಹ ಗ್ರಾಮವನ್ ಕೇಂದ್ರಗಳನ್ನು ತೆರೆಯಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

Leave a Comment