ನಮಸ್ಕಾರ ಸ್ನೇಹಿತರೆ ಯಾವುದೇ ರೀತಿಯ ಸರ್ಕಾರದ ಯೋಜನೆಗಳನ್ನು ಪಡೆಯಬೇಕಾದರೆ ಅತಿ ಮುಖ್ಯವಾದ ದಾಖಲೆಯೆಂದರೆ ಅದು ಆಧಾರ್ ಕಾರ್ಡ್ ಆಗಿದೆ. ಯಾವುದೇ ಒಂದು ಸಣ್ಣ ಆಧಾರ್ ಕಾರ್ಡ್ ನಲ್ಲಿ ಕಂಡುಬಂದರೂ ಸಹ ಸರ್ಕಾರದ ಯೋಜನೆಯು ಕೈತಪ್ಪಿ ಹೋಗುವುದು. ಉಚಿತವಾಗಿ ಆಧಾರ್ ಕಾರ್ಡ್ ನ ಹೆಸರು ಹುಟ್ಟಿದ ದಿನಾಂಕ ವಿಳಾಸ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಅದರಂತೆ ಈಗ ದಿನಾಂಕವನ್ನು ಸಹ ವಿಸ್ತರಣೆ ಮಾಡಲಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅವಧಿ ವಿಸ್ತರಣೆ :
ಡಿಸೆಂಬರ್ 14 ರಿಂದ 2024ರ ಮಾರ್ಚ್ ಹದಿನಾಲ್ಕರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಅದರಂತೆ ಇದು ಎರಡನೇ ಬಾರಿಗೆ ಈ ಅವಧಿಯ ವಿಸ್ತರಣೆಯನ್ನು ವಿಸ್ತರಿಸಲಾಗಿದೆ. ಮೊದಲು ಈ ಅವಧಿ ಇತ್ತು, ಅದಾದ ನಂತರ ಡಿಸೆಂಬರ್ 14ಕ್ಕೆ ಅವಧಿಯನ್ನು ಹೆಚ್ಚಿಸಲಾಯಿತು. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಗಡುವನ್ನು ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿಸಲಾಗಿದೆ ಎಂದು ಯುಐಡಿಎಐ ಅಧಿಕೃತವಾಗಿ ತಿಳಿಸಿದೆ.
ಇದನ್ನು ಓದಿ : ಸರ್ಕಾರಿ ನೌಕರರ ಪಿಂಚಣಿ ಬಗ್ಗೆ ಕೇಂದ್ರ ಸರ್ಕಾರದಿಂದ ಅಂತಿಮ ನಿರ್ಧಾರ
ಮಾರ್ಚ್ 14 ರವರೆಗೆ ವಿಸ್ತರಣೆ :
ಆಧಾರ್ ಕಾರ್ಡ್ ನಲ್ಲಿ ಹುಟ್ಟಿದ ದಿನಾಂಕ ವಿಳಾಸ ಹೆಸರು ಉಚಿತವಾಗಿ ಮಾರ್ಚ್ ಹದಿನಾಲ್ಕು 2024 ರ ವರೆಗೆ ನವೀಕರಿಸಬಹುದಾಗಿದೆ ಇದಾದ ನಂತರ ಸಂಸ್ಕರಣ ಶುಲ್ಕವಾಗಿ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಹಾಗಾಗಿ ಕೊನೆಯ ಆರು ದಿನದಲ್ಲಿ ಆಧಾರ್ ಕಾರ್ಡನ್ನು ನೀವೇ ಅಪ್ಡೇಟ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ನಲ್ಲಿರುವ ಈ ಮಾಹಿತಿಯನ್ನು ಆನ್ಲೈನ್ ಮೂಲಕವೇ ನವೀಕರಿಸಬಹುದಾಗಿತ್ತು ಮೈ ಆಧಾರ್ ಪೋರ್ಟಲ್ ನಲ್ಲಿ ಉಚಿತವಾಗಿ ನವೀಕರಣ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇರುವ ಯು ಐ ಡಿ ಎ ಐನ ಅಧಿಕೃತ ವೆಬ್ಸೈಟ್ https://myaadhaar.uidai.gov.in ಈ ವೆಬ್ಸೈಟ್ಗೆ ಭೇಟಿ ನೀಡಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು ದಿನಾಂಕ ಸ್ಥಳವನ್ನು ನವೀಕರಣ ಮಾಡಬಹುದಾಗಿದೆ.
ಹೀಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ತಿದ್ದುಪಡಿ ದಿನಾಂಕವನ್ನು 14 ಮಾರ್ಚ್ 2024ರ ವರೆಗೆ ವಿಸ್ತರಣೆ ಮಾಡಲಾಗಿದ್ದು ಈ ಮಾಹಿತಿಯ ಬಗ್ಗೆ ಶೇರ್ ಮಾಡುವುದರ ಮೂಲಕ ಇದುವರೆಗೂ ಯಾರು ಸಹ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೋ ಅವರಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.