ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗಲಿ ಎಂದು ಉದ್ದೇಶದಿಂದ ಜಾರಿಗೆ ತರಲಾಯಿತು. ಮಹಿಳೆಯರ ಬ್ಯಾಂಕ್ ಖಾತೆಗೆ ಮೂರು ತಿಂಗಳ ಹಣವನ್ನು ಜಮಾ ಮಾಡಲಾಗಿದ್ದು ಇದೀಗ ನಾಲ್ಕನೇ ಕಂತಿನ ಹಣವು ಸಹ ಹಂತ ಹಂತವಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಸಿದ್ಧತೆಯನ್ನು ನಡೆಸುತ್ತಿದೆ. 15 ಜಿಲ್ಲೆಗಳಲ್ಲಿ ನಾಲ್ಕನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ.
ನಾಲ್ಕನೇ ಕಂತಿನ ಹಣ ಬಿಡುಗಡೆ :
ಗುರು ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ಬೆಳಗಾವಿ ದಾವಣಗೆರೆ ಗದಗ ಹಾಸನ ಉತ್ತರ ಕನ್ನಡ ಚಿತ್ರದುರ್ಗ ಮಂಡ್ಯ ಮೈಸೂರು ಬೆಂಗಳೂರು ಕಲಬುರ್ಗಿ ರಾಯಚೂರು ಧಾರವಾಡ ಬಾಗಲಕೋಟೆ ಬಿಜಾಪುರ ಜಿಲ್ಲೆಗಳಲ್ಲಿ ಬಿಡುಗಡೆಯಾಗಿದ್ದು ಶೀಘ್ರದಲ್ಲಿಯೇ ಎಲ್ಲ ಜಿಲ್ಲೆಗಳಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸಲಾಗುತ್ತಿದೆ. ಮೊದಲನೇ ಕಂತಿನ ಹಣವೇ ಇನ್ನೂ ಕೂಡ ಕೆಲವೊಂದು ಮಹಿಳೆಯರಿಗೆ ಬಂದಿರುವುದಿಲ್ಲ.
ಇದನ್ನು ಓದಿ : ವಿದ್ಯಾರ್ಥಿಗಳಿಗಾಗಿ ಅಪಾರ್ ಕಾರ್ಡ್ : ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು
ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಓಪನ್ ಮಾಡುವುದು :
ಇನ್ನು ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವೇ ಬಂದಿರುವುದಿಲ್ಲ ಹಾಗಾಗಿ ಕೆಲವೊಂದು ಸಮಸ್ಯೆಗಳು ಉಂಟಾಗಿರುವ ಕಾರಣ ಯಾವುದೇ ರೀತಿಯ ಹಣವು ಅವರಿಗೆ ಜಮಾ ಆಗಿರುವುದಿಲ್ಲ. ಯಾವುದಾದರೂ ಒಂದು ಮಾಹಿತಿಯು ಅಕಸ್ಮಾತ್ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪಿದ್ದರೆ ಆಗ ಅಕೌಂಟಿಗೆ ಹಣ ಬರುವುದಿಲ್ಲ ಹಾಗಾಗಿ ನಿಮ್ಮ ಮಾಹಿತಿಗಳು ಸರಿ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.
ಜೊತೆಗೆ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲವೇ ಎಂಬುದನ್ನು ಚೆಕ್ ಮಾಡುವುದು ಮುಖ್ಯವಾಗಿದೆ. ಹೀಗೆಲ್ಲ ಮಾಹಿತಿಗಳು ಸರಿ ಇದ್ದರೂ ಸಹ ಹಣ ಬರದೆ ಇರಲು ಮುಖ್ಯ ಕಾರಣ ಏನೆಂದರೆ ಬ್ಯಾಂಕ್ ಅಕೌಂಟ್ ನಲ್ಲಿ ಸಮಸ್ಯೆ ಇರಬಹುದು ಹಾಗಾಗಿ ನೀವು ರಾಷ್ಟ್ರೀಕೃತ ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡ ಕೆನರಾ ಬ್ಯಾಂಕ್ ಎಸ್ ಬಿ ಐ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಗಳನ್ನು ಓಪನ್ ಮಾಡುವುದರ ಮೂಲಕ ಕೇವಲ ಎರಡೇ ದಿನಕ್ಕೆ ಜಮಾ ಆಗುತ್ತದೆ.
ಹೀಗೆ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವು ಜಮಾ ಆಗದೇ ಇದ್ದರೆ ಪೋಸ್ಟ್ ಆಫೀಸ್ ನಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಕೌಂಟ್ ಗಳನ್ನು ಓಪನ್ ಮಾಡುವುದರ ಮೂಲಕ ಕೇವಲ ಎರಡೇ ದಿನಗಳಲ್ಲಿ ಹಣ ಬರುವಂತೆ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತಿಳಿಸಿ ಧನ್ಯವಾದಗಳು.