ನಮಸ್ಕಾರ ಸ್ನೇಹಿತರೆ ನೀವೇನಾದರೂ ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅದರಂತೆ ಬೆಳೆ ವಿಮೆಯ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ನೀವು ಬೆಳೆ ವಿಮೆಯ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಯೋಚಿಸುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸುವುದರ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ದೇಶದ ಅನೇಕ ಕಡೆಗಳಲ್ಲಿ ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದು ಅನ್ನದಾತರು ಮಳೆಯನ್ನೇ ನಂಬಿದ್ದಾರೆ ಆದರೆ ಪ್ರಕೃತಿಯು ಈಗ ಅವರಿಗೆ ಬರವನ್ನು ನೀಡಿದೆ. ಇದೊಂದು ನೋವಿನ ಸಂಗತಿಯಾಗಿದ್ದು ಮಳೆಯನ್ನು ಅವಲಂಬಿತರಾಗಿರುವ ರೈತರು ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಕಂಕಲಾಗಿದ್ದಾರೆ ಅಂತಹ ರೈತರಿಗಾಗಿ ರಾಜ್ಯ ಸರ್ಕಾರವು ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ರೈತರು ಹಣವನ್ನು ಪಡೆದುಕೊಳ್ಳಬಹುದು.
ಬೆಳೆ ವಿಮೆ ನೀಡಲಾಗುತ್ತಿದೆ :
ಬರಗಾಲದ ಪರಿಸ್ಥಿತಿಯನ್ನು ಎದುರಿಸಿದ್ದು ಕಂಗಲಾಗಿರುವ ರೈತರಿಗೆ ಬಹುದೊಡ್ಡ ಪಾತ್ರವನ್ನು ಇದೀಗ ಇಂತಹ ಸಂದರ್ಭದಲ್ಲಿ ಬೆಳೆವಿಮೆಯು ವಹಿಸುತ್ತಿದೆ. ಕರ ಮತ್ತು ವಿಮಾ ಕಂಪನಿಗಳು ಒಂದಿಷ್ಟು ಪ್ರೀಮಿಯಮ್ ಅನ್ನು ಕಟ್ಟಿಸಿಕೊಂಡು ರೈತರಿಂದ ಬೆಳೆ ವಿಮೆಯನ್ನು ನೀಡುತ್ತವೆ. ಸರ್ಕಾರದ ಸಂರಕ್ಷಣಾ ಬೆಳೆ ವಿಮೆ 2023 24 ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ನೀವೇನಾದರೂ ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಸಂರಕ್ಷಣೆ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಇದನ್ನು ಓದಿ : ನವೆಂಬರ್ ಅನ್ನಭಾಗ್ಯ ಹಣ ಬಂದಿದೆಯಾ? ಈ ಕೂಡಲೇ ಚೆಕ್ ಮಾಡಿಕೊಳ್ಳಿ
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ವಿಧಾನ :
ಬೆಳೆ ವಿಮೆಗೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕಾದರೆ ಮೊದಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಕ್ರಾಪ್ ಇನ್ಸೂರೆನ್ಸ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕು. 2023 24 ಮತ್ತು ಖಾರಿಫ್ ಅನ್ನು ಆಯ್ಕೆ ಮಾಡಿ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಸಂರಕ್ಷಣ ಸ್ಟೇಟಸ್ ಚೆಕ್ ಮಾಡಲು ಇರುವ ಅಧಿಕೃತ ಸ್ಟೇಟಸ್ ಚೆಕ್ ಲಿಂಕ್ ಯಾವುದೆಂದರೆhttps://samrakshane.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಸ್ಟೇಟಸ್ ಚೆಕ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ನೀವು ಮೊಬೈಲ್ ನಂಬರ್ ಪ್ರಪೋಸಲ್ ಆಧಾರ್ ನಂಬರ್ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಬೆಳೆ ವಿಮೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವಂತಹ ಮೊಬೈಲ್ ನಂಬರ್ ಹಾಗೂ ಕ್ಯಾಪ್ಚಾ ಕೋಡನ್ನು ಎಂಟರ್ ಮಾಡಿ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇದರಿಂದ ನಿಮ್ಮ ಅರ್ಜಿ ಸ್ಥಿತಿ ಮತ್ತು ಯಾವ ಕಂಪನಿ ಬೆಳೆ ವಿಮೆ ನಿಮಗೆ ನೀಡಲಿದೆ ಎಂಬ ಮಾಹಿತಿ ನಿಮಗೆ ತಿಳಿಯುತ್ತದೆ.
ಹೀಗೆ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಲು ಯಾರಾದರೂ ನಿಮ್ಮ ಸ್ನೇಹಿತರು ಹೇಗೆ ಮಾಡಬೇಕೆಂದು ಯೋಚಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮೊಬೈಲ್ ನಲ್ಲಿಯೇ ಸುಲಭವಾಗಿ ತಿಳಿದುಕೊಳ್ಳಬಹುದು ಎಂಬುದನ್ನು ತಿಳಿಸಿ. ಇದರಿಂದ ಅವರು ತಮ್ಮ ಬೆಳೆ ವಿಮೆಯ ಸ್ಟೇಟಸ್ ತಿಳಿದುಕೊಳ್ಳಲಿ ಧನ್ಯವಾದಗಳು.